Thursday, 23 June 2016

ಯೋಗ ದಿನಾಚರಣೆ- Inauguration of International Yoga Festival 2016

ಆಲಕಾ ಜಿತೇಂದ್ರ - ಯೋಗ

ಯೋಗ
ಭಂಗಿಗಳ ದೇವತೆಗಳಿಗರುಹಿ
ಮಹಾದೇವನಾದ ಆದಿಯೋಗಿ
ಪತಂಜಲಿಯ ಯೋಗಸೂತ್ರವ ಗ್ರಹಿಸಿ
ವಿವೇಕಾನಂದರಾದರು ರಾಜಯೋಗಿ
ಚಂಚಲ ಚಿತ್ತವ ನಿಯಂತ್ರಿಸು
ಅಷ್ಟಾಂಗಯೋಗವ ಅಭ್ಯಸಿಸು
ಆಸನದಿಂ ವೃದ್ಧಿಸುವುದು ಚೈತನ್ಯ, ಆರೋಗ್ಯ
ಪ್ರಾಣಾಯಾಮದಿ ಉಸಿರು ನಿಯಂತ್ರಣ ಯೋಗ್ಯ
ಸ್ಥಿರ, ಶಾಂತ ಮನಸಿಗಾಗಿ ಧ್ಯಾನ
ಧನ್ಯವಾಯಿತು ಈ ಜೀವನ
ತನುಮನಗಳ ಸೇರಿಸಿ, ಬುದ್ಧಿಭಾವಗಳ ನಿಯಂತ್ರಿಸಿ,
ಪಂಚತತ್ವಗಳ ಮೀರಿ, ನೀಡಿ ಆಧ್ಯಾತ್ಮದ ಅನುಭೂತಿ
ಹರಿಯುತ್ತಲೇ ಇರಲಿ ಪ್ರಾಣ ನಿರಂತರ
ನಾಡಿಗಳಲಿ, ಚಕ್ರಗಳಲಿ
ಶಾಂತಿಬೀಜವ ಬಿತ್ತಲಿ
ದೇಶದೇಶಗಳ ಧಮನಿ ಧಮನಿಗಳಲಿ
ವಿಶ್ವ ಯೋಗದಿನದ ಶುಭಾಶಯಗಳು. ‪#‎internationalyogaday‬
-ಅಲಕಾ ಜಿತೇಂದ್ರ