Tuesday 10 May 2016

ಅಲಕಾ ಜಿತೇಂದ್ರ - ಅಮ್ಮನ ಬಿಸಿ ಅಪ್ಪುಗೆ

ಒಲ್ಲದ ಮನಸ್ಸು ಆ ಕಂದನಿಗೆ
ಅಮ್ಮನ ಅಗಲಿ ಹೋಗಲೇಬೇಕೆ ಶಾಲೆಗೆ?
ಬಸ್ಸೇರುವ ಹೊತ್ತು,
ಕಣ್ಣುಗಳಿಂದ ಸುರಿದಿತ್ತು ಮುತ್ತು
ಕಳೆದುಕೊಂಡಂತೆ ತನ್ನ
ರಕ್ಷಾಕವಚ,
ಭಯಭೀತ ಕಂದನಿಗೆ
ಅಮ್ಮನ ಮುತ್ತಿನ ಸಾಂತ್ವನ.
ಕಂದನ ಕಳುಹಿಸಿದ
ಅಮ್ಮನಿಗೂ ತಳಮಳ
ಇನ್ನೆಷ್ಟು ಹೊತ್ತು
ಬರಲು ಶಾಲಾವಾಹನ?
ಮತ್ತೆ ಮನೆಗೆ ಮರಳಲು
ಅರಳಿವೆ ಆ ಕಣ್ಣುಗಳು
ಕಾಣುತ್ತಲೇ ಅಮ್ಮ,
ಹಾರಿ, ಅವಳ ಸೊಂಟವೇರಿ,
ಕತ್ತು ಬಳಸಿ, ಕೆನ್ನೆಗೊಂದು ಮುತ್ತು
ಅಮ್ಮನ ಬಿಸಿ ಅಪ್ಪುಗೆಯ ಸುಖ
ಕಂದನಿಗಷ್ಟೇ ಗೊತ್ತು .
-ಅಲಕಾ ಜಿತೇಂದ್ರ.

Thursday 5 May 2016

ಡಾ / ಕೆ. ಎಸ್. ಪವಿತ್ರ - ‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!

‘ಆ ಕಾಯಿಲೆ-ಈ ಕಾಯಿಲೆ’ ಎಂಬ ಆತಂಕ!: “ಡಾಕ್ಟ್ರೇ, ಇವರಿಗೆ ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಆತಂಕ. ಯಾವುದೇ ದಿನಪತ್ರಿಕೆಯಲ್ಲಿ ಯಾವುದಾದರೂ ಕಾಯಿಲೆಯ ಬಗ್ಗೆ ಬಂದರೆ ಅದರ ಬಗ್ಗೆ ಓದಿ, ತನಗೆ ಅದೇ ಕಾಯಿಲೆ ಇದೆ ಅಂದುಕೊಳ್ಳೋದು. ಆಮೇಲೆ ಇದ್ದಬದ್ದ ಪರೀಕ್ಷೆ ಎಲ್ಲಾ ಮಾಡಿಸೋದು. ‘ತಲೆನೋವು’ ಅಂದ್ರೆ ನಾವೆಲ್ಲಾ ಏನು ಮಾಡ್ತೀವಿ? ‘ಓ, ಇವತ್ತು ಊಟ ಮಾಡೋದು ಲೇಟಾಯ್ತಲ್ಲ’ ಅಂತ ಅಂದ್ಕೋತೀವಿ. ಸುಮ್ಮನಾಗ್ತೀವಿ.

Tuesday 3 May 2016

ಬದುಕಿಗೆ ನಿವೃತ್ತಿಯೇ ಇಲ್ಲ

ಬದುಕಿಗೆ ನಿವೃತ್ತಿಯೇ ಇಲ್ಲ: ಕೆಲಸದ ಬಗ್ಗೆ, ನಿವೃತ್ತಿ ಬಗ್ಗೆ ಜನ ತಪ್ಪಾದ ಅಭಿಪ್ರಾಯ ಹೊಂದಿದ್ದಾರೆ. ನಾನು ಕಡಿಮೆ ಕೆಲಸ ಮಾಡಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ವರ್ಷ ಕಳೆದಂತೆ ಅದು ನಂಬಿಕೆಯಾಗಿ ಬದಲಾಗುತ್ತದೆ.